Press "Enter" to skip to content

ಅನನ್ಯ ದಿನದರ್ಶಿಕೆ ಲೋಕಾರ್ಪಣೆ

ಬೆಂಗಳೂರು, ನವಂಬರ್ ೨೦, ೨೦೦೫: [http://www.ananyaculture.org/|ಅನನ್ಯ ಸಾಂಸ್ಕೃತಿಕ] ಸಂಸ್ಥೆಯವರು ಹೊರತಂದಿರುವ [http://vishvakannada.com/node/59|ಹನ್ನೆರಡನೆಯ ದಿನದರ್ಶಿಕೆ] ಅನನ್ಯ ಕ್ಯಾಲೆಂಡರ್ ೨೦೦೬ನ್ನು ಎಸ್. ರಾಜಾರಾಂ ಅವರು ಲೋಕಾರ್ಪಣೆ ಮಾಡಿದರು. ಅವರು ಮಾತನಾಡುತ್ತಾ ‘ಭಗವಾನ್ ಶ್ರೀಕೃಷ್ಣನು ಅಕ್ಷರಾಣಾಂ ಅಕರೋಸ್ಮಿ ಎಂದಿದ್ದಾನೆ. ಅನನ್ಯದಲ್ಲಿ “ಅ” ಅಕ್ಷರವಿದೆ, ಅಥವಾ “ಅ” ಅಕ್ಷರದಿಂದ ಅದು ಪ್ರಾರಂಭವಾಗುತ್ತದೆ. ಆದುದರಿಂದ ಅದು ಭಗವಂತನಿಗೆ ಪ್ರಿಯ. ಹಾಗೆಯೆ ನಮಗೂ ನಿಮಗೂ ಪ್ರಿಯ’ ಎಂದರು. ಡಾ. ಟಿ. ಎಸ್. ಸತ್ಯವತಿಯವರ ನಿರ್ದೇಶನದಲ್ಲಿ ಕೊಳಲುವಾದನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ರಾಘವೇಂದ್ರ ಅವರು ಎಲ್ಲರನ್ನು ಸ್ವಾಗತಿಸಿದರು. ‘ವಿಜ್ಞಾನದ ಹಲವು ವಿಭಾಗಗಳು ಒಂದಕ್ಕೊಂದು ಜೊತೆ ಸೇರುತ್ತಿವೆ. ಜೊತೆ ಸೇರಿ ಕೆಲಸ ಮಾಡುತ್ತಿವೆ. ಇದರಿಂದ ವಿಜ್ಞಾನ ಮುಂದುವರಿಯುತ್ತಿದೆ. ಆದರೆ ಕಲೆಯಲ್ಲಿರುವ ಹಲವು ಪ್ರಕಾರಗಳು ಯಾವಾಗ ಜೊತೆ ಸೇರಿ ಮುಂದುವರಿಯುವುದು?’ ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು. ಈ ಸಲದ ಕ್ಯಾಲೆಂಡರ್‌ಗೆ ಬಳಸಿದ ಛಾಯಾಚಿತ್ರಗಳನ್ನು ತೆಗೆದ ರಾಘವೇಂದ್ರ ರಾವ್ ಅವರು ತಮ್ಮ ಅನುಭವಗಳನ್ನು ಹೇಳಿದರು. ಬಿ. ಭಾನುಮತಿಯವರ ನಿರ್ದೇಶನದ ಭರತಾಂಜಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Be First to Comment

Leave a Reply

Your email address will not be published. Required fields are marked *