ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ
ಬೀದರ್‌ನಲ್ಲಿ ಆಗಸ್ಟ್ ೩ ರಿಂದ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಪ್ರಾರಂಭ
ಬೆಂಗಳೂರು, ಜುಲೈ ೧೩:- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೆಳನವನ್ನು ಬಿ.ವಿ.ಬಿ. ಮಹಾವಿದ್ಯಾಲಯ ಬೀದರ್‌ನಲ್ಲಿ ಬೀದರ್ ವಿಜ್ಞಾನ ಕೇಂದ್ರದ ಸ್ಥಳೀಯ ಸಂಘಟನೆಯಲ್ಲಿ ಆಗಸ್ಟ್ ೩ ರಿಂದ ೫ ರವರೆಗೆ ಏರ್ಪಡಿಸಲಾಗಿದೆ.
ಸಮ್ಮೇಳನ ೩ ದಿನಗಳ ಕಾಲ ನಡೆಯಲಿದ್ದು “ ವಿಜ್ಞಾನ ಶಿಕ್ಷಣ ಮತ್ತು ಮೌಲಿಕ ಸುಧಾರಣೆಗಳು” ಕೇಂದ್ರ ವಿಷಯವಾಗಿದ್ದು ಈ ಸಂಬಂಧ ಅಧಿವೇಶನಗಳು ಮತ್ತು ಪ್ರಬಂಧ ಮಂಡನೆಗಳು ಶಿಕ್ಷಣ ಪರಿಮಿತದಿಂದ ಮಂಡನೆಗೊಳ್ಳಲಿದೆ. ಸಾಮಾನ್ಯ ಮತ್ತು ಉಪ ಅಧಿವೇಶನಗಳಲ್ಲಿ ಪ್ರಮುಖ ವಿಷಯಗಳಾಗಿ ಪ್ರೌಢ ಶಿಕ್ಷಣ ಹಂತದಲ್ಲಿ ವಿಜ್ಞಾನಗಳ ಬೋಧನೆ, ವಾಸ್ತವಿಕತೆ ಮತ್ತು ಸುಧಾರಣೆ, ವಿಜ್ಞಾನ ಪ್ರಶಿಕ್ಷಣದಲ್ಲಿ ಈಗಿನ ಪರಿಸ್ಥಿತಿ ಹಾಗೂ ಮುಂದಿನ ಯೋಜನೆಗಳು, ವಿಜ್ಞಾನ ಶಿಕ್ಷಣದ ಉನ್ನತೀಕರಣದಲ್ಲಿ ಸರ್ಕಾರದ ಪ್ರಯತ್ನ ಹೀಗೆ ಹತ್ತು ಹಲವು ಪ್ರಗತಿಪರ ವಿಷಯಾಧಾರಿತ ಕಾರ್ಯಾಗಾರಗಳೂ ಜರುಗಲಿವೆ. ಸಮ್ಮೇಳನದ ಪ್ರತಿನಿಧಿ ಶುಲ್ಕ ಸಾಮಾನ್ಯ ಸದಸ್ಯರಿಗೆ ರೂ. ೨೦೦, ಕ.ರಾ.ವಿ.ಪ. ಘಟಕ ದಾನಿ ಸಂಸ್ಥೆಗಳು ಹಾಗೂ ದಾನಿ ಸದಸ್ಯರಿಗೆ ರೂ. ೫೦ ರಂತೆ ನಿಗದಿಪಡಿಸಿದೆ. ಭಾಗವಹಿಸುವ ಪ್ರತಿನಿಧಿಗಳಿಗೆ ಓಓಡಿ ಸೌಲಭ್ಯ ಕಲ್ಪಿಸಲಾಗುವುದು. ನೋಂದಣಿಗೆ ಜುಲೈ ೨೫ ಕೊನೆಯ ದಿನಾಂಕವಾಗಿದೆ. ಪ್ರತಿನಿಧಿ ಶುಲ್ಕವನ್ನು ಎಂ.ಓ. ಡಿಡಿ ಮುಖೇನ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಭವನ, ಸಂ. ೨೪:೩ ೨೧ನೇ ಮುಖ್ಯ ರಸ್ತೆ, ಬನಶಂಕರಿ ೨ನೇ ಹಂತ ಬೆಂಗಳೂರು ೫೬೦ ೦೭೦ (ದೂರವಾಣಿ ೦೮೦-೨೬೭೧೮೯೩೯ ಫ್ಯಾಕ್ಸ್ ೦೮೦-೨೬೭೧೮೯೫೯ ಇ ಮೇಲ್ krvp_edu@dataone.in) ಇವರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ ಪ್ರೊ:ಸಿ.ಡಿ. ಪಾಟೀಲ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರನ್ನು ಸಂಪರ್ಕಿಸಲು ಕೋರಿದೆ.