ಕನ್ನಡ = ಬಡವರ ಭಾಷೆ?
-ಡಾ| ಯು.ಬಿ. ಪವನಜ
ಕೆಲವು ಉದಾಹರಣೆಗಳನ್ನು ಗಮನಿಸಿ:
೧. ಮುಂಬಯಿಯಿಂದ ಬೆಂಗಳೂರಿಗೆ ಹೋಗುತ್ತಿರುವ ವಿಮಾನ. ಚಿಕ್ಕಪ್ರಾಯದ ದಂಪತಿಗಳು ಸುಮಾರು ೩ ವರ್ಷ ಪ್ರಾಯದ ಮಗುವಿನ ಜೊತೆ ಕೂತಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಗಂಡ ಓದುತ್ತಿದ್ದುದು ಇಂಡಿಯಾ ಟುಡೇ ಪತ್ರಿಕೆ. ದಂಪತಿಗಳು ತಮ್ಮ ನಡುವೆ ಮತ್ತು ಮಗುವಿನೊಡನೆ ಮಾತನಾಡಲು ಉಪಯೋಗಿಸುತ್ತಿದ್ದ ಭಾಷೆ ಇಂಗ್ಲಿಷ್. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದಂತೆ ದಂಪತಿಗಳು ತಮ್ಮೊಡನೆ ಹಾಗೂ ಮಗುವಿನೊಡನೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಹೊರಬಂದು ರಿಕ್ಷಾ ಅ