ನಮ್ಮ ಗೆಳೆಯ ಚಂದಮಾಮ
– ಸುರಭಿ ಬೆಳ್ಳಿಪ್ಪಾಡಿ
ಚಂದಮಾಮ ಚಂದಮಾಮ
ಹುಣ್ಣಿಮೆ ದಿನದ ಚಂದಮಾಮ
ನೋಡಲು ಬಲು ಸುಂದರ
ಬೇಗ ಬಾ ನಮ್ಮ ಹತ್ತಿರ
ಬೆಳದಿಂಗಳಾಟವ ಆಡಿಸು
ನಮ್ಮ ಮನ ಸಂತಸಗೊಳಿಸು
ಕತ್ತಲೆಯ ಭಯವ ಓಡಿಸುವೆ
ಅಭಯವ ನೀನು ನೀಡುವೆ
ತಾರೆಗಳೊಡನೆ ಆಡುವೆ
ಆಡಿ ನಕ್ಕು ನಲಿಯುವೆ
ಎಲ್ಲರನು ಆಕರ್ಷಿಸುವೆ
ಎಲ್ಲರ ಮನ ತಣಿಸುವೆ
February 8th, 2012 at 6:38 pm
super