ಚಿನಕುರಳಿ – ೦೭

– ಮರ್ಕಟ

ಭಾರತೀಯ ರೈಲುಗಳನ್ನು ಆಕರ್ಷಕಗೊಳಿಸಲು ಅವುಗಳಿಗೆ ವಿವಿಧ ಬಣ್ಣಗಳನ್ನು ಬಳಿಯಲಾಗುವುದು ಎಂದು ರೈಲು ಮಂತ್ರಿಗಳು ಹೇಳಿದ್ದಾರೆ.
ಹಾಗೆಯೇ ಸೇವೆಯನ್ನೂ ಉತ್ತಮಗೊಳಿಸುವುದೊಳಿತು.

ಪ್ರತಿ ಸಂತನಿಗೂ ಒಂದು ಇತಿಹಾಸವಿದೆ, ಪ್ರತಿ ಅಪರಾಧಿಗೂ ಒಂದು ಭವಿಷ್ಯವಿದೆ -ಅಟಲ್‌ಬಿಹಾರಿ ವಾಜಪೇಯಿ, ಉತ್ತರಪ್ರದೇಶದ ಬಿ.ಜೆ.ಪಿ. ಸರಕಾರದಲ್ಲಿ ಅಪರಾಧಿಗಳು ತುಂಬಿಕೊಂಡಿರುವ ಬಗ್ಗೆ .
ಇರಬಹುದು. ಆದರೆ ಅಪರಾಧಿಗಳು ಮಂತ್ರಿಗಳಾದರೆ ರಾಜ್ಯದ/ದೇಶದ ಭವಿಷ್ಯದ ಗತಿಯೆನು?

ಬ್ರಿಗೇಡ್ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ ಇತ್ಯಾದಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ `ಕನ್ನಡದಲ್ಲೇ ನಾಮಫಲಕ ಹಾಕಿ’ ಎಂದು ಬರೆದಿದ್ದ ಬ್ಯಾನರ್‌ಗಳನ್ನು ಹಿಡಿದು ಕನ್ನಡ ಚಳುವಳಿಗಾರರು ಮೆರವಣಿಗೆ ನಡೆಸಿದರು.
ಕನ್ನಡ ಓದಲು ಬಾರದಿದ್ದ ಹೆಚ್ಚಿನ ಅಂಗಡಿ ಮಾಲೀಕರಿಗೆ ಅದರ ಪ್ರಭಾವವೇ ಆಗಲಿಲ್ಲ.

ಇಂಜಿನೇ ಇಲ್ಲದೆ ಗೂಡ್ಸ್ ರೈಲೊಂದು ೨೦ಕಿ.ಮೀ. ಚಲಿಸಿದ ಸುದ್ದಿ ತಮಿಳಿನಾಡಿನಿಂದ ಬಂದಿದೆ.
ಸರಿಯಾದ ನಾಯಕರೇ ಇಲ್ಲದೆ ದೇಶವೇ ಚಲಿಸುತ್ತಿಲ್ಲವೆ?

(೧೯೯೭)

Leave a Reply