ಚಿನಕುರಳಿ-೦೫

ಮರ್ಕಟ

ದೇವೇಗೌಡರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
ಒಂದಕ್ಕೊಂದು ವಿರೋಧಿ ಗುಣದ ಪಕ್ಷಗಳನ್ನು ಕಸಿ ಕಟ್ಟಿ ಸರಕಾರ ನಡೆಸಿದ್ದಕ್ಕೆ?

`ನನಗೆ ಆಸ್ಕರ್ ಪ್ರಶಸ್ತಿ ಬರುವ ತನಕ ನಾನು ನಂ.೧ ಎಂದು ತಿಳಿದುಕೊಳ್ಳುವುದಿಲ್ಲ’ ಎಂದು ಹಿಂದಿ ಸಿನಿಮಾ ನಟ ಗೋವಿಂದ ಹೇಳಿದ್ದಾರೆ.
ಉತ್ತಮ ಅಶ್ಲೀಲ ನೃತ್ಯ ಎಂಬ ಪ್ರಶಸ್ತಿ ಆಸ್ಕರ್‌ನಲ್ಲಿ ಇಲ್ಲ ಎಂದು ಅವರಿಗೆ ತಿಳಿದಿಲ್ಲ, ಪಾಪ.

`ದೇಶದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾನು ಅಸಹಾಯಕನಾಗಿದ್ದೇನೆಂದು ನನಗೆ ನಾಚಿಕೆಯಾಗುತ್ತಿದೆ’ -ಹೀಗೆಂದವರು ದೇಶದ ಪ್ರಧಾನಿ ಶ್ರೀ ಐ.ಕೆ. ಗುಜ್ರಾಲ್ ಅವರು.
ಇಂತಹ ಅಸಹಾಯಕ ವ್ಯಕ್ತಿ ದೇಶದ ಪ್ರಧಾನಿ ಎಂದು ಹೇಳಿಕೊಳ್ಳಲು ನಮಗೂ ನಾಚಿಕೆಯಾಗುತ್ತದೆ.

ಜುಲೈ ೧ರಿಂದ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಅಧಿಕೃತವಾಗಿ ವಿದ್ಯುತ್ ನಿಲುಗಡೆ ಮಾಡುತ್ತಿದ್ದುದನ್ನು ನಿಲ್ಲಿಸಲಾಗಿದೆ ಎಂದು ಕೆ.ಇ.ಬಿ. ಪ್ರಕಟಣೆ ತಿಳಿಸಿದೆ.
ಅನಧಿಕೃತವಾಗಿ ದಿನವಿಡೀ ಯಾವಾಗೆಂದರೆ ಆವಾಗ ವಿದ್ಯುತ್ ನಿಲುಗಡೆ ಮಾಡುತ್ತಿದ್ದುದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಅದು ತಿಳಿಸಿಲ್ಲ.

(೧೯೯೭)

Leave a Reply