ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ ಸವಲತ್ತನ್ನು ನೀಡಿರುದುವರಿಂದ ಹವ್ಯಾಸಿ ಛಾಯಾಚಿತ್ರಗಾರರೂ ಮ್ಯಾಕ್ರೋ ಫೋಟೋಗ್ರಾಫಿ ಮಾಡುತ್ತಿದ್ದಾರೆ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಮ್ಯಾಕ್ರೋ ಫೋಟೋಗ್ರಾಫಿಗೆಂದೇ ವಿಶೇಷ ಲೆನ್ಸ್‌ಗಳಿವೆ.
Be First to Comment