ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ. ಅಧಿಕ ಕಂಪನಾಂಕದ (ಹರ್ಟ್ಝ್, Hertz, Hz) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪಾದನೆ ಮಾಡತಕ್ಕದ್ದು. ಸಾಮಾನ್ಯವಾಗಿ ಚಿಕ್ಕ ಗಾತ್ರದ ಸ್ಪೀಕರ್‌ಗಳು ಉತ್ತಮ ಬಾಸ್ ಹೊಂದಿರುವುದಿಲ್ಲ.
Be First to Comment