ಮಾಟಗಾತಿ
ಆನಂದ
[ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಣ್ಣ ಕತೆಗೊಂದು ಮಹತ್ವ ತಂದಕೊಟ್ಟವರಲ್ಲಿ ಆನಂದ ಕೂಡ ಒಬ್ಬರು. ೧೯೩೦ರ ಸಂದರ್ಭದಲ್ಲೇ ಕಥಾಲಹರಿ ಹರಿಸಿದ್ದ ಆನಂದರ ನಿಜ ಹೆಸರು ಅಜ್ಜಂಪುರದ ಸೀತಾರಾಮ. `ನಾನು ಕೊಂದ ಹುಡುಗಿ’ ಅವರ ಜನಪ್ರಿಯತೆಗೆ ಸಾಕ್ಷಿಯಾದ ಕತೆ. `ಮಾಟಗಾತಿ’ ಮತ್ತೊಂದು ಅಂಥ ಹಾದಿಯಲ್ಲಿನ ಕತೆ. ಮಾಸ್ತಿ ಅವರು ಆನಂದರನ್ನು ಕುರಿತು “—-ದೂರದ ಗುರಿಯ ಮೇಲೆ ಕಣ್ಣಿಟ್ಟು ದೊಡ್ಡ ರೀತಿಯಲ್ಲಿ ಮುಂದೆ ನಡೆಯಿರಿ—" ಎಂದಿದ್ದರು. ಅಂತೇ ದೂರದ ಗುರಿಯನ್ನು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೈ ಆಡಿಸುತ್ತ ಸಮೀಪಿಸಿದರು. ಏಳು ಕಥಾ ಸಂಕಲನ, ಮೂರು ನಾಟಕಗಳು, ಏಳು ಅನುವಾದಿತ ಕೃತಿಗಳು ಹಾಗು ಇತರ ನಾಲ್ಕು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದ ಆನಂದರು ಮುಖ್ಯವಾಗಿ ಕತೆಗಾರರಾಗಿ ನಮ್ಮ ನೆನಪಲ್ಲಿ ಉಳಿದಿದ್ದಾರೆ. ಹಿರಿ ಕತೆಗಾರರ ಅತ್ಯುತ್ತಮ ಕತೆಗಳನ್ನು ಓದುಕರು ಪ್ರಕಟಿಸಿ ಎಂದು ಕೇಳಿದ್ದಾರೆ. ಆನಂದರ `ನಾನು ಕೊಂದ ಹುಡುಗಿ’ ಸಾಕಷ್ಟು ದೀರ್ಘವಾದ ಕತೆ ಆದ್ದರಿಂದ ಅದನ್ನು ಇಲ್ಲಿ ಪ್ರಕಟಿಸದೆ ಅಷ್ಟೇ ಮಹತ್ವದ `ಮಾಟಗಾತಿ’ ಕೊಡುತ್ತಿದ್ದೇವೆ. ಇದು ನಿಮಗೆ ಪ್ರಿಯವಾಗಬಹುದೆಂದು ಭಾವಿಸುತ್ತೇವೆ. -ಸಂಪಾದಕ]
ಇಂದಿಗೆ ಇಪ್ಪತ್ತು ದಿನಗಳಾದವು- ಹೌದು, ಇಪ್ಪತ್ತು -ಇವತ್ತು ಯಾವ ವಾರ?-ಗುರುವಾರ-ಹೌದು, ಸರಿಯಾಗಿ ಇಪ್ಪತ್ತು ದಿನಗಳು. ಈ ಇಪ್ಪತ್ತು ದಿನಗಳಿಂದ ಅವಳನ್ನು ನೋಡುತ್ತಿದ್ದೇನೆ; ಒಂದು ದಿನವೂ ತಪ್ಪಿಲ್ಲ. ಅವಳು ಯಾರು? ಹೆಸರೇನು? ಹೇಗಿದ್ದಾಳೆ?… ಸ್ವಲ್ಪ ನಿದಾನಿಸಿ; ಎಲ್ಲವನ್ನೂ ಹೇಳುತ್ತೇನೆ. ಅದಕ್ಕೆ ಮುಂಚೆ ಹೇಳಬೇಕಾದ ವಿಷಯಗಳು ಒಂದೆರಡಿವೆ. ನಾನು ಎಲ್ಲಿ ಕುಳಿತು ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೋ ಇಲ್ಲಿ- ಈ ಮನೆ ಅಲ್ಲ ಕೊಠಡಿಯಲ್ಲಿ ಒಬ್ಬನೇ ವಾಸವಾಗಿದ್ದೇನೆ, ಇಷ್ಟು ಸಾಕು ಸದ್ಯಕ್ಕೆ. ನನ್ನ ಊಟ-ತಿಂಡಿ ಕೆಲಸ ಇವುಗಳ ವಿಚಾರ ಈಗ ಬೇಡ. ಅದರಿಂದ ನಿಮಗೂ ಉಪಯೋಗವಿಲ್ಲ; ನನಗಂತೂ ಮೊದಲೇ ಇಲ್ಲ.
ಇನ್ನು ಅವಳ ವಿಚಾರ. ಅವಳು ಯಾರು? ಗೊತ್ತಿಲ್ಲ. ಹೆಸರೇನು?-ತಿಳಿಯದು. ಹೇಗೆ ಇದ್ದಾಳೆ? ಅವಳು ಹಾಗೆ ಇದ್ದಾಳೆ- ಹೀಗೆ ಇದ್ದಾಳೆ. ಇನ್ನು ಹೇಗೋ ಇದ್ದಾಳೆ-ಎಂದು ಒಂದು ಮಾತಿನಲ್ಲಿ ಹೇಳಿ ಮುಗಿಸಲಾರೆ. ಅಲ್ಲದೆ ಸ್ತ್ರೀ ವರ್ಣನೆಯ ವಿಚಾರದಲ್ಲಿ “ಶ್ರೀನಿವಾಸರು" ಮಾಡಿರುವ ಕವಿಗಳ ಭರ್ತ್ಸನೆಯನ್ನು ಓದಿದಮೇಲಂತೂ ಕೈ ಸ್ವಲ್ಪ ಹಿಮ್ಮೆಟ್ಟುತ್ತಿದೆ! ಆದರೂ “ಅವರ ಭರ್ತ್ಸನೆ ಕವಿಗಳಿಗೆ ತಾನೆ! ನಾನು ಕವಿಯಲ್ಲವಲ್ಲ!" ಎಂದು ಹೇಳಿಕೊಂಡು ಧೈರ್ಯಮಾಡುತ್ತೇನೆ.
ನಾನು ನಿಮಗೆ ವರ್ಣಿಸುವುದಾದರೂ ಆಕೆಯ ಮುಖವನ್ನು ಮಾತ್ರ ಏಕೆಂದರೆ ಈ ಇಪ್ಪತ್ತು ದಿನಗಳಿಂದ ನನ್ನ ದೃಷ್ಟಿಯನ್ನು ತಳದಿರುವುದು ಆ ಮುಖ ಮಾತ್ರ. ಇದುವರೆಗೂ ನಾನು ಅವಳೊಡನೆ ಮಾತನಾಡಿಲ್ಲ; ಆಕೆಯ ದನಿಯನ್ನು ಕೇಳಿಲ್ಲ. ಎಲ್ಲಿ ಹುಟ್ಟಿದಳೋ, ಎಲ್ಲಿ ಬೆಳೆದಳೋ ಅರಿಯೆ. ಆದರೂ ಈ ಇಪ್ಪತ್ತು ದಿನಗಳಿಂದ ಆಕೆಯನ್ನು ತಪ್ಪದೆ ನೋಡಿದ್ದೇನೆ. ಸಲಸಲವೂ ನಮ್ಮ ದೃಷ್ಟಿಗಳು ಒಂದಾಗಿವೆ; ಸಲಸಲಕ್ಕೆ ಅವಳು ನನಗೆ ಹೆಚ್ಚು ಹೆಚ್ಚು ಆತ್ಮೀಯಳಾಗಿದ್ದಾಳೆ.
ಅವಳ ಮುಖವನ್ನು ಏನೆಂದು ವರ್ಣಿಸಲಿ? ನೀವು ಒಂದು ಮಾತಿನಲ್ಲಿ ಗ್ರಹಿಸಬಲ್ಲವರಾದರೆ ಹೇಳುತ್ತೇನೆ ಕೇಳಿ-ಅವಳು ಸುಂದರಿ. “ಎಂತಹ ಸುಂದರಿ?" ಎಂದರೆ ಮಾತ್ರ ಹೇಳಲಾರೆ. ಸೌಂದರ್ಯದಲ್ಲಿ ಭೇಧವುಂಟು. ಇನಿಯಳ ರೂಪವೆ? ತಾಯ ಸೌಂದರ್ಯವೆ? ವೇಶ್ಯಯ ಬೆಡಗೆ? ಹೀಗೇ ಸರಿ-ಎಂದು ಹೇಳಲಾರೆ. ರವೀಂದ್ರ ಕವಿಯು ಊರ್ವಶಿಯನ್ನು ವರ್ಣಿಸುತ್ತ “ಎಲೌ ಊರ್ವಶಿಯೇ, ಮಾತೆಯಲ್ಲ, ಮಗಳಲ್ಲ, ಮಡದಿಯನ್ನಲ್ಲ ನೀನು! ಅಮರಲೋಕದ ಆತ್ಮವನ್ನು ಸೂರೆಗೊಳ್ಳುವ ಸ್ತ್ರೀ ನೀನು!" ಎಂದು ಹೇಳಿದ್ದಾನೆ. ನಾನು ಅವಳನ್ನು ಊರ್ವಶಿಗೆ ಹೋಲಿಸಲಾರೆ; ಏಕೆಂದರೆ ಆ ಸ್ವರ್ಗವಾಸಿಯನ್ನು ನಾನು ಇನ್ನೂ ನೋಡಿಲ್ಲ- ನೋಡುವ ಸಂಭವವೂ ಇಲ್ಲ! ಒಂದು ವೇಳೆ (ಗೊತ್ತು ಇಲ್ಲಾ ಅಂತ! -ಆದರೂ) ನೋಡಿದರೂ ಆಗ ನಿಮಗೆ ಹೇಳಲಾರೆ. ಕಾರಣವೇನೆಂದರೆ, ಆಗ ನನಗೂ ನಿಮಗೂ ವ್ಯವಹಾರ ನಿಂತುಹೋಗಿರುತ್ತದೆ! ಹಾಗಾದರೆ ಅವಳನ್ನು ಇನ್ನು ಹೇಗೆ ವರ್‍ಣಿಸಲಿ? ಅವಳ ಮುಖ ಚಂದ್ರಬಿಂಬಕ್ಕೆ ಸಮನಾಗಿಲ್ಲ ಕಣ್ಣಿನ ಸೊಬಗು ಕಮಲದಿಂದ ಕದ್ದದ್ದಲ್ಲ. ಅವಳ ನಾಸಿಕಕ್ಕೂ ಸಂಪಿಗೆ ಹೂವಿಗೂ ಪರಿಚಯವೇ ಇಲ್ಲ. ಅವಳ ತುಟಿಗಳ ಅಂದ ತೊಂಡೆಯ ಹಣ್ಣಿನಿಂದ ಬಂದ ಬಳುವಳಿಯೂ ಅಲ್ಲ. ಮತ್ತೆ ಇನ್ನು ಹೇಗೆ? ನೋಡಿ, ಸಾವಿರ ವರ್ಣನೆಗಳೂ ಒಂದು ಸಲದ ನೋಟಕ್ಕೆ ಸರಿತೂಗಲಾರವು. ನೀವು ಮಾವಿನ ಹಣ್ಣನ್ನು ತಿಂದಿಲ್ಲವೆ? ಅದರ “ರುಚಿಯೇನು?"…. ಎಂದರೆ, “ಸಿಹಿ" -ಎನ್ನುವಿರಿ. ಆದರೆ ಎಂತಹ ಸಿಹಿ? ಸಕ್ಕರೆಯ ಸಿಹಿಯೆ? ಕಬ್ಬಿನ ಸಿಹಿಯೆ? ಕಿತ್ತಲೆಯ ರುಚಿಯೆ? ಸೇಬಿನ ಸವಿಯೆ?…ಯಾವುದು? ಎಲ್ಲವೂ ಮಧುರ; ಆದರೆ ಬೇರೆ ಬೇರೆ
ಮಾಧುರ್‍ಯ. ಮಾವಿನ ಹಣ್ಣನ್ನು ಕಾಣದವನಿಗೆ ಸೇಬಿನ ಹಣ್ಣನ್ನು ಕೊಟ್ಟು ಮಾವಿನ ಹಣ್ಣಿನ ಪರಿಚಯವನ್ನು ಮಾಡಿಕೊಡಲಾಗುವುದೆ? ಅದು ನನ್ನ ಕೈಲಂತೂ ಆಗದ ಕೆಲಸ. ಅವಳನ್ನು ವರ್ಣಿಸುವುದರಲ್ಲಿ ನನಗಿರುವ ಕಷ್ಟವನ್ನು ನೀವು ಗ್ರಹಿಸುವುದಾದರೆ, ಆಕೆಯ ಸೌಂದರ್ಯವನ್ನೂ ಗ್ರಹಿಸಬಲ್ಲಿರಿ.
ಅವಳನ್ನು ಇಷ್ಟು ದಿನಗಳಿಂದ ನೋಡಿ ನೋಡಿ, ಈಗ ನೆನಸಿಕೊಂಡ ಮಾತ್ರಕ್ಕೆ ನನ್ನ ಚಿತ್ತದಲ್ಲಿ ಸ್ಫೂರ್ತಿಸುವುದು ಆಕೆಯ ಮುಖ ಮಾತ್ರ; ಇನ್ನು ಉಳಿದುದೆಲ್ಲಾ ಕತ್ತಲು. ಆ ಕತ್ತಲಿನಲ್ಲಿ ಆ ಮುಖ ಸೌಮ್ಯ ಪ್ರಭೆಯ ಪುಟ್ಟದೊಂದು ಜ್ವಾಲೆಯಂತೆ ತೋರುತ್ತದೆ. ಕೂಡಲೆ ನಾನು (ನನ್ನ ಹೃದಯ -ಮನಸ್ಸು- ಏನು ಬೇಕಾದರೂ ತಿಳಿದುಕೊಳ್ಳಿ!) ಒಂದು ಪತಂಗದಂತೆ ಆಗುತ್ತೇನೆ. ಆ ರೂಪವತಿಯ ಮುಖದ ಸೊಬಗಿನ ಅನುಭವದ ಪೂರ್ಣವಾಗಿ ನಿಮಗೆ ಆಗಬೇಕಾದರೆ ನೀವೂ ನನ್ನ ಹಾಗೆಯೇ ಪತಂಗವಾಗಬೇಕು. ಅದು ಸಾಧ್ಯವೋ?….ಇಲ್ಲವೋ?….ಬಿಡಿ ನನ್ನ ಈ ಮಾತುಗಳನ್ನು ಕೇಳಿ ನೀವು “ಇದೇನು ಹುಚ್ಚು! –ಇವನಿಗೆ!" ಎಂದು ಯೋಚಿಸಬಹುದು. ಯೋಚಿಸಿ, ಪರವಾ ಇಲ್ಲ. ಆದರಿಂದ ನನ್ನ ಮನಸ್ಸು ಸ್ವಲ್ಪವೂ ನೋಯುವುದಿಲ್ಲ; ಧೈರ್ಯವಾಗಿರಿ. ಏಕೆಂದರೆ ನಿಮ್ಮ ಯೋಚನೆ ತಪ್ಪಲ್ಲ. ಇರೋ ಸಂಗತಿ ಹೇಳಿಬಿಡುತ್ತೇನೆ: ನನಗೆ ಅವಳ ಮುಖ ಎಂದರೆ ಸ್ವಲ್ಪ (ಸ್ವ-ಲ್ಪ-ವೇ-ನು! ಚೆನ್ನಾಗಿಯೂ!) ಹುಚ್ಚೇ ಸರಿ. ಈ ಹುಚ್ಚು ಇದುವರೆಗೂ ನಾನು “ಬಾ" ಅಂದಾಗ ಬಂದು, “ಹೋಗು" ಅಂದಾಗ ಹೋಗುತ್ತಾ ಒಂದು ತೆರದಲ್ಲಿ ವಿಧೇಯವಾಗಿದೆ. ಆದರೆ ಅದು ಅವಿಧೇಯತನಕ್ಕೆ ಬಿದ್ದು ನನ್ನ ಮರ್ಯಾದೆ ಕಳೆಯುತ್ತೋ ಹೇಳಲಾರೆ. ದೇವರು ಆ ದಿನವನ್ನು ದೂರವಾಗಿಟ್ಟಿರಲಿ. ಒಂದು ವೇಳೆ ಆ ದಿನ ಬಂದರೂ ನನ್ನ ಮಾರ್ಯಾದೇನಾದರೂ ಭದ್ರಮಾಡಲಿ.
ನನ್ನ ಹುಚ್ಚಿಗೆ ಮುಖ್ಯ ಕಾರಣ ಆಕೆಯ ಮುಖದ ಮೇಲೆ ಶಾಶ್ವತವಾಗಿ ನೆಲಸಿರುವ ಆ ಮೆಲುನಗೆ! ಅದನ್ನು ಹೇಗೆ ವರ್ಣಿಸಲಿ? ಇಲ್ಲಿಯೂ ಅದೇ ಗೋಳು! ವರ್ಣಿಸುವುದಕ್ಕೆ ಪ್ರಯತ್ನಿಸಿದರೆ ಹುಚ್ಚು ಹೆಚ್ಚುವುದೇ ಹೊರತು ಪ್ರಯತ್ನವು ಸಫಲವಾಗುವಂತೆ ತೋರುವುದಿಲ್ಲ. ಈ ಇಪ್ಪತ್ತು ದಿನಗಳಿಂದ ಆ ಮುಖ, ಆ ಮುಖದಲ್ಲಿ ಆ-ಆ-ಆ ಎಂಥಾ ಮೆಲುನಗೆಯೆಂದು ಹೇಳಲಿ? -ಆ ಮೆಲುನಗೆಯನ್ನು ಮೇಲಿಂದಮೇಲೆ ನೋಡಿದ್ದರೂ ಅದನ್ನು ವರ್ಣಿಸುವುದಕ್ಕೆ ಒಂದು ಮಾತೂ ಇಲ್ಲವಾಗಿದೆ! ಮಧುವನ್ನು ಸವಿದ ಮೂಕನಂತಾಗಿದ್ದೇನೆ! ಆಹಾ! ಆ ಮುಗುಳ್ನಗೆ! ಅಯ್ಯಾ, ಮಧುಮಾಸದಲ್ಲಿ ನೀವು ವನಗಳಲ್ಲಿ ಅಡ್ಡಾಡಿಲ್ಲವೆ? (“ಇಲ್ಲ" ಎಂದರೆ ನನ್ನ ಮುಂದಿನ ಮಾತುಗಳು ಕಿನ್ನರಿ ಬಾರಿಸಿದ ಹಾಗೆಯೇ ಸರಿ. “ಹು" ಎಂದರೆ) ಅಲ್ಲಿ ನಿಮಗೆ ಪರಿಚಯವಿಲ್ಲದ ಪರಿಮಳವೊಂದು ಗಾಳಿಯಲ್ಲಿ ಬೆರೆತು ಬರತೊಡಗಲು, ನೀವು ನಿಮ್ಮ ಹೆಜ್ಜೆಗಳನ್ನು ನಿದಾನಿಸಿ- ನಿಂತು-ಸುತ್ತಮುತ್ತ ನೋಡಿಲ್ಲವೇ? ಹಾಗೆ ನೋಡುವಾಗ ಒಂದು ದಿಕ್ಕಿನಲ್ಲಿ ಜಾಡು ಹಿಡಿದು, ಅಲ್ಲಿ ಇಲ್ಲಿ ಸುಳಿದು ಹೋಗಿ, ಒಂದೆಡೆಯಲ್ಲಿ ಆ ಅಪರಿಚಿತವಾದ ಪರಿಮಳಕ್ಕೆ ನೆಲೆಯಾದ ಹೂವಿನ ಗಿಡವನ್ನೋ ಬಳ್ಳಿಯನ್ನೋ ನೋಡಿ ಆನಂದಪಟ್ಟಿಲ್ಲವೆ? ನೋಡಿ, ಆ ಪರಿಮಳವು ಹೇಗೆ ನಿಮ್ಮ ಮೂಗನ್ನು ಹಿಡಿದು ಎಳೆದೊಯ್ದಿತೋ ಹಾಗೆಯೇ ಅವಳ ಮುಗುಳ್ನಗೆ ಈ ಇಪ್ಪತ್ತು ದಿನಗಳಿಂದಲೂ ನನ್ನ ಕಣ್ಮನವನ್ನು ಸೆಳೆದಿದೆ. ಈ ಉಪಮಾನದಿಂದ ನನಗೂ ಆಕೆಯ ಮುಗುಳ್ನಗೆಗೂ ಇದ್ದ ಸಂಬಂಧವನ್ನು ವ್ಯಕ್ತ ಪಡಿಸಿದಂತಾಯಿತೇ ಹೊರತು ಮುಗುಳ್ನಗೆಯನ್ನು ವರ್ಣಿಸದಂತಾಗಲಿಲ್ಲ. ಸೋಲನ್ನು ಒಪ್ಪಿಕೊಂಡುಬಿಡುತ್ತೇನೆ – ನಾನು ವರ್ಣಿಸಲಾರೆ. ನನ್ನ ಸ್ನೇಹಿತರು ಕೆಲವರು ನನ್ನ ವರ್ಣನಾಶಕ್ತಿಗೆ ಮೆಚ್ಚಿ, ತಮ್ಮ ತಲೆದೂಗಿ, ನನ್ನ ತಲೆ ತಿರುಗುವ ಇವಳು ನನ್ನ ಕಣ್ಣಿಗೆ ಬಿದ್ದಳೋ ಏನೋ?-ಎಂದು ಒಂದೊಂದು ಸಲ ಅನ್ನಿಸುತ್ತದೆ. ಅಂದಿನಿಂದ ಇದುವರೆಗೆ ಎಷ್ಟೋ ಬಾರಿ ಮನದಲ್ಲೇ “ಕುಸುಮವೇ, ನಿನ್ನನ್ನು ನಾನು ವರ್ಣಿಸಲಾರೆ!" ಎಂದು ತಲೆಬಾಗಿ ಹೇಳಿದ್ದೇನೆ. ಇನ್ನು ಆ ಕಣ್ಣುಗಳು! “ಓಹೋ! ತುಟಿಯಾಯಿತು-ಇನ್ನು ಕಣ್ಣಿಗೆ ಹೋದನೋ!" ಎಂದು ಧೋರಣೆಮಾಡಿ, ನನ್ನನ್ನು ನೂಕಬೇಡಿ, ದೇವರು ನಿಮಗೆ ಕೊಟ್ಟಿರುವ ಕಣ್ಣುಗಳು ಸಾರ್ಥಕವಾಗಬೇಕಾದರೆ ನೀವು ಅವಳ ಕಣ್ಣುಗಳನ್ನೊಮ್ಮೆ ನೋಡಬೇಕು. “ಏನು ಮಲ್ಲಿಗೆಯರಳಲ್ಲಿ ಸೆರೆಯಾದ ಮರಿದುಂಬಿಯಂತಿತ್ತೋ?" ಎಂದು ಹಾಸ್ಯಮಾಡುವಿರೋ? ಅಥವಾ “ಎಣಾಕ್ಷಿಯೋ? -ಉತ್ಪಲಾಕ್ಷಿಯೋ? ಪದ್ಮನಯನೆಯೋ? ಪ್ರಪುಲ್ಲನಯನೆಯೋ?" ಎಂದು ಕೇಳುವಿರಾ? ನಾನೇನು ಅವುಗಳನ್ನು ಯೋಚಿಸದೆ ಇಲ್ಲ. ಈ ಇಪ್ಪತ್ತು ದಿನಗಳಿಂದ ಸುಮ್ಮನೆ ಇದ್ದೆನೆಂದು ತಿಳಿದುಕೊಂಡಿರಾ? ಯೋಚಿಸಿದ್ದೇನೆ- ಚರ್ಚೆಮಾಡಿದ್ದೇನೆ- ಚಿಂತಿಸಿದ್ದೇನೆ. ವರ್ಣಿಸಿದ್ದೇನೆ. ಅವುಗಳಲ್ಲಿ ಚಾವ ಒಂದು ಹೆಸರುಗಳನ್ನೆಲ್ಲಾ ಸಮನಾದ ಹದದಲ್ಲಿ ಬೆರಸಿ ಒಂದು ಸಮಾಸವನ್ನು ಮಾಡಬಲ್ಲಿರಾ? ನೋಡಿ, ಪ್ರಯತ್ನ ಮಾಡಿ; “ಮರಳಿ ಯತ್ನವ ಮಾಡಿ" ನೋಡಿ.
ನಮ್ಮ ದೃಷ್
November 17th, 2013 at 6:30 pm
e kathe ge artha ne elladanta kathe
March 27th, 2020 at 8:39 pm
Excellent narration