ಕೋಲಾ ಕುಡಿಯುತ್ತಿದ್ದೀರಾ ಎಚ್ಚರ!

– ಡಾ| ಡಿ. ಕೆ. ಮಹಾಬಲರಾಜು

ಕೋಲಾ ಪುರಾತನ ಕಾಲದಿಂದ ಬಂದ ಪೇಯವಲ್ಲ. ಇದು ಈಗ ಬಯಸದವರಿಗೂ ಬಲವಂತವಾಗಿ ದೊರೆಯುತ್ತಿರುವ ಪಾನೀಯ. ಬೇಡ ಬೇಡ ಎನ್ನುವವರನ್ನೂ ಮರುಳುಗೊಳಿಸಿ, ಅವರ ಮನೆಯಲ್ಲಿಯೇ ಬೇರೂರುತ್ತಿರುವ ಲಘುಪೇಯ ಇದು. ಇಂದಿನ ಯುವಜನತೆಗಂತೂ ಕೋಲಾವೇ ಸರ್ವಸ್ವ. ಇದೇ ಸಂಸ್ಕೃತಿ.
ಒಂದು ದಿನ ನಮ್ಮ ಮನೆಗೆ ಮೂರು ಜನ ಸ್ನೇಹಿತರು ಬಂದಿದ್ದರು. ಆ ಮೂವರೊಂದಿಗೆ ನಾಲ್ಕನೆಯವನಾಗಿ ನಾನು ತಿರುಗಾಡಲು ಹೊರಟೆ. ಉರಿಬಿಸಿಲ ಬೇಗೆ ತಡೆಯಲಾರದೆ ಒಂದು ಕೂಲ್‌ಡ್ರಿಂಕ್ಸ್ ಅಂಗಡಿಗೆ ಹೋಗಿ ಕುಳಿತೆವು. ನನ್ನ ಸ್ನೇಹಿತ ನಾಲ್ಕು ಸೀಸೆ ಕೋಲಾ ತರಲು ಆರ್ಡರ್ ಮಾಡಿದ. ತಕ್ಷಣ ನಾನು “ನನಗೆ ಕೋಲಾ ಬೇಡ. ಯಾವುದಾದರೂ ಹಣ್ಣಿನ ಜ್ಯೂಸ್ ಹೇಳು” ಎಂದೆ. ಆತ ಆಶ್ಚರ್ಯದಿಂದ ಏಕೆ ಎಂದು ಕೇಳಿದ. `ನೋಡಪ್ಪಾ, ನಾನು ಈಗ ಕೋಲಾ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದೇನೆ’ ಎಂದೆ. ಆತ ದಿಗ್ಭ ಮೆಗೊಂಡ. ನನ್ನನ್ನು ಗುಗ್ಗು ಎಂದು ಕೊಂಡಿರಲೂಬಹುದು. `ಅಲ್ಲಪ್ಪಾ ಮೊದಲು ಕೋಲಾ ಎಂದರೆ ಸಾಯ್ತಾ ಇದ್ದಿ, ಈಗ ಯಾಕೆ ಬಿಟ್ಟೆ’ ಎಂದು ಕೇಳಿದ. ಆಗ ನಾನು, `ನೋಡಪ್ಪಾ ತಂಪು ಪಾನೀಯಗಳ ದುಷ್ಪರಿಣಾಮಗಳ ಕುರಿತಂತೆ ವಿವರವಾಗಿ ತಿಳಿದುಕೊಂಡ ನಂತರ ಪ್ರಭಾವಿತನಾಗಿದ್ದೇನೆ. ಆ ವಿವರಗಳನ್ನು ನನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದೇನೆ ಓದುತ್ತೇನೆ ಕೇಳಿ’ ಎಂದೆ. ಅನಂತರ ಮನಸ್ಸು ಬದಲಿಸಿ ನಾನೇ ಓದುವುದಕ್ಕಿಂತ ನೀವ್ಯಾರಾದರೂ ಓದಿ ಎಂದು ಕೈಗೆ ಅದನ್ನು ಕೊಟ್ಟೆ ನನ್ನ ಸ್ನೇಹಿತ ಓದತೊಡಗಿದ.

-ಕೋಲಾವನ್ನೂ ನೀರಿನಿಂದಲೇ ತಯಾರಿಸಲಾಗುತ್ತದೆ. ಸಿಹಿಗಾಗಿ ಸಕ್ಕರೆಯ್ನನೋ ಅಥವಾ (ಸ್ಯಾಕ್ರಿನ್‌ನಂತಹ) ಕೃತಕ ವಸ್ತುವನ್ನೋ ಬೆರೆಸುತ್ತಾರೆ. ಜೊತೆಗೆ ಇಂಗಾಲದ ಡೈ ಆಕ್ಸೈಡ್, ಫಾಲ್ಪರಿಕ್ ಆಮ್ಲ, ಕಾರ್ಬೋನಿಕ್ ಆಮ್ಲ ಇವೇ ಬಾಟಲಿಕೃತ ತಂಪುಪಾನೀಯಗಳ ಜೀವಾಳ. ಕೃತಕ ರುಚಿ, ಬಣ್ಣ ಕಂಪು, ಪರಿಮಳ, ಇವನ್ನೆಲ್ಲಾ ಸೃಷ್ಟಿಸಲು ಹಲವು ರೀತಿಯ ರಾಸಾಯನಿಕಗಳನ್ನು ಹಾಕುತ್ತಾರೆ. ಮನಸ್ಸಿಗೆ ಹಿತಕೊಡಲು ಪಾನೀಯವನ್ನು ತಂಪುಗೊಳಿಸಲಾಗುತ್ತದೆ. ಒಟ್ಟಾರೆ ಪಾನೀಯದಲ್ಲಿನ ಸಕ್ಕರೆ ಶಕ್ತಿದಾಯಕ, ಕೆಫಿನ್ ಉಲ್ಲಾಸದಾಯಕವಾಗಿ ವರ್ತಿಸುತ್ತದೆ.

-ಇಂಗಾಲದ ಡೈ ಆಕ್ಸೈಡ್ ತ್ಯಾಜ್ಯವಸ್ತು. ದೇಹ ಇದನ್ನು ಸುಸೂತ್ರವಾಗಿ ಹೊರಹಾಕದಿದ್ದರೆ ಅನಾರೋಗ್ಯ ಉಂಟಾಗುತ್ತದೆ ಎನ್ನುತ್ತದೆ, ವಿಜ್ಞಾನ. ಆದರೆ ನಾವಿಲ್ಲಿ ಕೋಲಾ ಕುಡಿಯುತ್ತಾ ದೇಹಕ್ಕೆ ಪುನಃ ತ್ಯಾಜ್ಯವಸ್ತುವನ್ನೇ ತುಂಬುವುದು ಎಂತಹ ಅಪಾಯ. ಎಂತಹ ವಿಪರ್ಯಾಸ.

-ಕೋಲಾ ೦.೪ ಡಿಗ್ರಿ ಸೆಂಟಿಗ್ರೇಡ್‌ಗಳಷ್ಟು ತಂಪಾಗಿರುತ್ತದೆ. ಇದು ಜಠರಕ್ಕ ಅಹಿತರಕವೆಂದು ಮತ್ತೆ ಹೇಳಬೇಕಾಗಿಲ್ಲವಷ್ಟೆ. ಜೊತೆಗೆ ಕೋಲಾದಲ್ಲಿ ಹೇರಳವಾಗಿ ಇರುವ ಫಾಸ್ಪರಿಕ್ ಆಮ್ಲ, ಜಠರದ ಆಮ್ಲವನ್ನು ಪರಿಣಾಮಹೀನವಾಗಿಸುತ್ತದೆ.

-ಇದರೊಂದಿಗೆ ಇಂಗಾಲದ ಡೈ ಆಕ್ಸೈಡ್ ಬೇರೆ ಇದೆ. ಹೀಗಾಗಿ ಕೋಲಾ ಕುಡಿಯುವುದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಡೇಗು ಮುಂತಾದ ತೊಂದರೆಗಳು ತಕ್ಷಣ ತಲೆದೋರುತ್ತವೆ. ದೀರ್ಘಕಾಲಾನಂತರದ ತೊಂದರೆಗಳು ಮತ್ತೇನಿವೆಯೋ ಎಂದು ಯಾರೂ ತಲೆಕೆಡಿಸಿಕೊಂಡಿಲ್ಲ.

-ಕೋಲಾ ಆಮ್ಲೀಯ ಗುಣಸಂಪನ್ನವಾದದ್ದು. ದೇಹದ ಆಮ್ಲೀಯತೆ ಅನೇಕ ರೀತಿಯ ರೋಗಗಳಿಗೆ ನೆಲೆಕಟ್ಟಾಗಿದೆ. ನೀವು ಒಂದು ಸೀಸೆ ಕೋಲಾ ಸೇವಿಸಿದ ಆಮ್ಲವನ್ನು ಪರಿಪೂರ್ಣವಾಗಿ ಹೊರಗಟ್ಟಲು ಮೂತ್ರಪಿಂಡಗಳನ್ನು ಜೀತದಾಳಾಗಿ ದುಡಿಸಬೇಕಾಗುತ್ತದೆ. ಜೊತೆಗೆ ಕ್ಷಾರಗುಣದ ಮೂವತ್ತೆರಡು ಬಾಟಲಿ ಶುದ್ಧ ನೀರನ್ನು ಕುಡಿಯಬೇಕಾಗುತ್ತದೆ.

-ಕೋಲಾದಲ್ಲಿ ಇರುವ ಫಾಸ್ಪರಿಕ್ ಆಮ್ಲ ದೇಹದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಪ್ರಮಾಣವನ್ನು ಅಲ್ಲೋಲಕಲ್ಲೋಲಗೊಳಿಸಿ ಮೂಳೆಗಳನ್ನು ಪೊಳ್ಳಾಗಿಸುತ್ತದೆ. ಕೋಲಾ ಹಲ್ಲುಗಳಿಗಂತೂ ಯಮದೂತ. ಡಾ| ಕ್ರೆವ್ ಮ್ಯಾಕ್ ಎಂಬ ವಿಜ್ಞಾನಿ ಪ್ರಯೋಗಾತ್ಮಕವಾಗಿ, ತಾನು ಸಾಕಿದ ಇಲಿಗಳಿಗೆ ಉತ್ತಮೋತ್ತಮ ಆಹಾರ ನೀಡಿದ. ಆದರೆ ಅದಕ್ಕೆ ಕುಡಿಯಲು ಮಾತ್ರ ಕೋಲಾವನ್ನೇ ಕೊಡುತ್ತಿದ್ದ. ಆರು ತಿಂಗಳ ಅನಂತರ ಬಹಳಷ್ಟು ಇಲಿಗಳ ಹಲ್ಲುಗಳೆಲ್ಲಾ ಹಾಳಾಗಿ ಹೋಗಿದ್ದವು. ಕೆಲ ಇಲಿಗಳ ವಸಡೂ ಸಹ ದುರ್ಬಲಗೊಂಡಿದ್ದವು. ಇದೇ ರೀತಿಯ ಪ್ರಯೋಗಗಳಿಂದ ಜಪಾನಿನ ಡಾ| ಯೊಶಿಹೈಡ್ ಅವರು ಹಲ್ಲುಗಳು ಹಾಳಾಗುವುದಲ್ಲದೆ ಇಲಿಗಳ ಮೂಳೆಗಳೂ ಸಹ ಪೊಳ್ಳಾಗಿರುವುದನ್ನು ಪತ್ತೆ ಹಚ್ಚಿದರು. ಅಮೆರಿಕದ ಡಾ| ಜೀಮ್ಸ್ ಅವರೂ ಸಹ ಈ ಸಂಗತಿಯನ್ನು ದೃಢಪಡಿಸಿದ್ದಾರೆ. ಕೋಲಾ ಕುಡಿದ ಇಲಿಗಳಿಗೆ ಜನಿಸಿದ ಮರಿಗಳು ಅಂಗವಿಕಲತೆಗೆ ಒಳಗಾಗಿರುವುದನ್ನು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ.

-ವಜ್ರಕ್ಕಿಂತ ಕಠಿಣವಾದ ಹಲ್ಲು ಭೂಮಿಯಲ್ಲಿ ಹೂತು ಹೋದರೂ ಹಾಳಾಗುವುದಿಲ್ಲ. ಆದರೆ ಕೆಲದಿನಗಳವರೆಗೆ ಕೋಲಾದಲ್ಲಿ ನೆನಸಿದ್ದರೆ ಪಿಸಕಲಾಗಿ ಬಿಡುತ್ತವೆ ಎಂದು ತಿಳಿದು ಬಂದಿದೆ.

-ಕೋಲಾದಲ್ಲಿ ಸಕ್ಕರೆ ಅಂಶ ಅಧಿಕ. ಹೀಗಾಗಿ ಇದರ ಹೆಚ್ಚು ಸೇವನೆ ಬೊಜ್ಜನ್ನು ಬರಮಾಡಿಕೊಳ್ಳುತ್ತದೆ. ಇತ್ತೀಚೆಗೆ ದೊರೆಯುತ್ತಿರುವ `ಡಯಟ್’ ಕೋಲಾಗಳಲ್ಲಿ ಸ್ಯಾಕ್ರಿನ್‌ನಂತಹ ಕೃತಕ ಸಿಹಿಕಾರಗಳಿವೆ. ಸ್ಯಾಕ್ರಿನ್ ಬಳಕೆಯಿಂದ ನಿದ್ರಾಹೀನತೆ, ಮುಂಗೋಪ, ನಿಶ್ಯಕ್ತಿ, ತಲೆನೋವು, ಅರೆತಲೆನೋವು ಉಂಟಾಗುತ್ತದೆ. ಸ್ಯಾಕ್ರಿನ್ ದೀರ್ಘಕಾಲದ ತೊಂದರೆಗಳ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ಕೋಲಾದಲ್ಲಿರುವ ಕೆಫಿನ್ ಇದೇ ರೀತಿಯ ತೊಂದರೆಗಳನ್ನು ಉಂಟು ಮಾಡಬಲ್ಲದಲ್ಲದೆ ಕುಡಿದವರ ಎದೆ ಬಡಿತವನ್ನೂ ಹೆಚ್ಚಿಸುತ್ತದೆ. ಗರ್ಭಿಣಿಯರು ಸೇವಿಸಬಾರದ ಔಷಧಿಗಳ ಪಟ್ಟಿಯಲ್ಲಿ ಕೆಫಿನ್‌ಗೆ ಅಗ್ರಸ್ಥಾನ ಇದೆ.

-ಕೋಲಾದಲ್ಲಿನ ಫಾಸ್ಪರಸ್ ಮತ್ತು ಸೋಡಿಯಂನ್ನು ಸಮರ್ಥವಾಗಿ ಸೋಸಿ ಹಾಕುವ ಶಕ್ತಿ ನಲವತ್ತಕ್ಕೂ ಹೆಚ್ಚು ವಯಸ್ಸಾದವರ ಮೂತ್ರ ಪಿಂಡಕ್ಕೆ ಇರುವುದಿಲ್ಲ. ಹೀಗಾಗಿ ವಯಸ್ಕರು ಹೆಚ್ಚು ಕೋಲಾ ಕುಡಿಯುವುದರಿಂದ ಬಿ. ಪಿ. ಏರುತ್ತದೆಯಲ್ಲದೆ, ಮೂತ್ರಪಿಂಡಕ್ಕೂ ಗಂಭೀರ ರೀತಿಯ ಗಾಸಿಯಾಗುತ್ತದೆ. ಒಂದು ದಿನ ರಾತ್ರಿ ನೀವು ೩-೪ ಬಾಟಲಿ ಕೋಲಾ ಕುಡಿದು ಮರುದಿನ ಬೆಳಿಗ್ಗೆ ವಿಸರ್ಜಿಸುವ ಮೂತ್ರದಲ್ಲಾಗಿರುವ ವಿಲಕ್ಷಣ ಬದಲಾವಣೆಗಳನ್ನು ಗಮನಿಸಿ. ಕೋಲಾ ಪ್ರಿಯರಿಗೆ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವುದು ಸಾಮಾನ್ಯವೆಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ.

-ಕೋಲಾದಲ್ಲಿ ಮಿಳಿತಗೊಂಡ ಹಾನಿಕಾರಕ ರಸಾಯನಿಕಗಳು ಅನೇಕ ರೀತಿಯಲ್ಲಿ ಅಲರ್ಜಿಯನ್ನುಂಟು ಮಾಡಬಲ್ಲವು ಎಂದು ಕ್ಯಾಲಿಫೋರ್ನಿಯಾದ ಡಾ| ಜಾರ್ಜ್ ಹೇಳಿದ್ದಾರೆ.

-ಡಾ| ಫಾನ್ಸಿಸ್ಕೊ ಕೊರಿಟ್ರಾರೀಸ್ ಅವರು ಅಭಿಪ್ರಾಯಿಸಿದಂತೆ ಅಮೆರಿಕದಲ್ಲಿ ಪ್ರತಿ ವ್ಯಕ್ತಿ ಸರಾಸರಿ ವರ್ಷಕ್ಕೆ ೮೦೦ ಬಾಟಲಿ ಕೋಲಾ ಕುಡಿಯುತ್ತಾನೆ. ಹೀಗಾಗಿ ಅಮೆರಿಕನ್ನರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲವನ್ನು ನನ್ನ ಗೆಳೆಯ ಓದಿ ಮುಗಿಸಿದಾಗ ಎಲ್ಲರ ಮುಖಗಳೂ ಸಪ್ಪಗಾಗಿದ್ದವು.

ನಾನೇ ಮೌನಮುರಿದು `ನೋಡಿ ನನಗೆ ನಾಲ್ಕು ದಿನ ತೊಂದರೆ ಇಲ್ಲದೆ ಬದುಕುವ ಆಸೆ ಇದೆ. ಆದುದರಿಂದ ನಾನು ಕೋಲಾ ಕುಡಿಯುವುದಿಲ್ಲ. ಇದರ ಬದಲಿಗೆ ನಾನು ನಿಂಬೆರಸ, ಮಜ್ಜಿಗೆ, ಎಳನೀರು, ಹಣ್ಣಿನರಸ ಕುಡಿಯುತ್ತೇನೆ ಎಂದು ಹೇಳಿದೆ.

ಯಾರ ಕೋಲಾ ಬಾಟಲಿಗಳೂ ಪೂರ್ಣ ಖಾಲಿಯಾಗಲಿಲ್ಲ. ನಾನಂತೂ ಗಡದ್ದಾಗಿ ದ್ರಾಕ್ಷಿರಸ ಕುಡಿದೆ. ತಕ್ಷಣ ನೆನೆಪಿಗೆ ಬಂದ ಒಂದು ವಿಷಯವನ್ನು ಇಲ್ಲಿ ಹೇಳುತ್ತೇನೆ.

ದೆಹಲಿಯ ಶಾಲೆಯೊಂದರಲ್ಲಿ ಕೋಲಾ ಕುಡಿಯುವ ಸ್ಪರ್ದೆ ನಡೆಯಿತಂತೆ. ಅತಿ ಹೆಚ್ಚು ಬಾಟಲಿ ಕೋಲಾ ಕುಡಿದು ಮೊದಲ ಬಹುಮಾನಗಳಿಸಿದ ವಿದ್ಯಾರ್ಥಿ ಬಹುಮಾನ ಸ್ವೀಕರಿಸುವ ಮೊದಲೇ ಸತ್ತು ಹೋದ. ಅಂದಿನಿಂದ ಆ ಶಾಲೆಯಲ್ಲಿನ ಕ್ಯಾಂಟಿನ್‌ನಲ್ಲಿ ಕೋಲಾ ಮಾರುವುದನ್ನು ನಿಷೇಧಿಸಿದ್ದಾರಂತೆ.

ಇನ್ನು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಹೀಗಾಗಿ ಕೋಲಾ ಕುಡಿಯುವುದನ್ನು ಕುಡಿಯದೆ ಇರುವುದನ್ನು ನಿರ್ಧರಿಸುವುದನ್ನು ತಮಗೆ ಬಿಟ್ಟಿದ್ದೇನೆ.

(೨೦೦೧)

4 Responses to ಕೋಲಾ ಕುಡಿಯುತ್ತಿದ್ದೀರಾ ಎಚ್ಚರ!

 1. Lokesh Shetty

  Saccharine Sodium is not used in Diet Cola. Its a normal sweetener but on chronic use it induce carcinogenic effect.

  Sucralose, Acesulfame potassium & Aspartame are used in Diet Cola as it is Low Calorie Sweetener.

  Aspartame is found to be carcinogenic in animals, but in humans its carcinogenic is still not proved. Also information on aspartame toxic effects are just internet rumors.

  Advice: Drink cola in moderate amounts, not to be a addict or abusive..

  Regards,

  Dr. Lokesh Shetty
  Pharmacologist & Toxicologist

 2. chandrashekhar

  this is everyone as to read and know the about

 3. ರಾಜಣ್ಣ

  ತುಂಬಾ ವಿಶಾಯ ಇದೇ

 4. Tara

  This article contains good information. Everyone should read this and try to avoid unhealthy food/drinks.

Leave a Reply